ಮಹದಾಯಿ ವಿವಾದ : ನೀರಿನ ಸಮಸ್ಯೆಗೆ ಉಪ್ಪಿ ಬಳಿ ಇದೆ ಪರಿಹಾರ | Oneindia Kannada

2017-12-27 105

Kannada actor and KPJP party chief Upendra has taken his twitter account to give suggestion about Mahadayi river problem. Mahadayi protest is held by farmers in front of BJP Office, Malleshwaram Bengaluru.

ಬೆಂಗಳೂರಿನಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ. ಹೋರಾಟದಲ್ಲಿ ಭಾಗಿಯಾಗಿರುವ ರೈತರು ಸಿನಿಮಾ ನಟರು ಕೂಡ ನಮ್ಮ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಹೇಳಿದ್ದರು. ಅದೇ ರೀತಿ ನಿನ್ನೆ ಕೆಲವು ನಟರು ಮತ್ತು ಇಂದು ನಟ ಶಿವರಾಜ್ ಕುಮಾರ್ ಮತ್ತು ಯಶ್ ರೈತರ ಹೋರಾಟಕ್ಕೆ ಜೊತೆಯಾಗಲಿದ್ದಾರೆ. ಇವುಗಳ ನಡುವೆಯೇ ನಟ ಹಾಗೂ ಕೆ.ಪಿ.ಜೆ.ಪಿ ಪಕ್ಷದ ಮುಖ್ಯಸ್ಥ ಉಪೇಂದ್ರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಪುಸ್ತಕದ ಎರಡು ಪುಟಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಇರುವ ಒಂದು ಘಟನೆಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಈ ಹಿಂದೆ ಕಾವೇರಿ ಹೋರಾಟದ ವೇಳೆ ಉಪೇಂದ್ರ ''ಜನರಿಗೆ ಕಾವೇರಿ ನೀರಿನ ಸಮಸ್ಯೆ ಇಲ್ಲ.. ನೀರಿನ ಸಮಸ್ಯೆ ಇದೆ'' ಎಂದು ಹೇಳಿದ್ದರು.ಅದೇ ರೀತಿ ಈಗಲೂ ಒಂದು ಸಣ್ಣ ಉದಾಹರಣೆ ಮೂಲಕ ಮಹದಾಯಿ ಮಾತ್ರವಲ್ಲ ರಾಜ್ಯದ ನೀರಿನ ಸಮಸ್ಯೆಯನ್ನು ಯಾವ ರೀತಿ ಬಗೆ ಹರಿಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ.

Videos similaires